ರಿಪಬ್ಲಿಕ್ ಡೇಗೆ ಸಿನಿಮಾ - ಟಿವಿ ಡೈರೆಕ್ಟರಿ
Posted date: 09 Tue, Dec 2014 – 10:35:53 AM

ಕನ್ನಡದ ಸಿನಿಮಾ ಮತ್ತು ಟಿವಿ ರಂಗಗಳಲ್ಲಿ ಇಂದು ತಮ್ಮನ್ನು ತೊಡಗಿಸಿಕೊಂಡಿರುವ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ಛಾಯಾಗ್ರಾಹಕರು, ಸಂಗೀತ ನಿರ್ದೇಶಕರು ಹಾಗೂ ಎಲ್ಲಾ ವಿಭಾಗಗಳ ತಂತ್ರಜ಼್ಞರ ಸಂಖ್ಯೆ ಸಾವಿರಾರು.
ಹಾಗೆ ಇಲ್ಲಿನ ಥಿಯೇಟರ್, ಸ್ಟುಡಿಯೋ, ಚಿತ್ರೀಕರಣ ಘಟಕಗಳು, ತರಭೇತಿ ಸಂಸ್ಥೆ, ಮುಂತಾದ ಸುಮಾರು ೫೦ ವಿಭಾಗಗಳಲ್ಲಿರುವವರ ಸಂಖ್ಯೆಯು ಹಲವು ಸಾವಿರ ದಾಟುತ್ತದೆ. ಈ ಎಲ್ಲಾ ವಿಭಾಗಗಳ ವಿಳಾಸ, ಸಂಪರ್ಕ ಸಂಖ್ಯೆಗಳನ್ನು ಹುಡುಕಲು ಬಹಳ ಕಷ್ಟಪಡುವ ಸಂದರ್ಭವಿದ್ದ ದಿನಗಳವು. ಇಂತಹ ಸಂದರ್ಭದಲ್ಲಿ ಈ ಎಲ್ಲರ ವಿಳಾಸ, ಸಂಪರ್ಕ ಸಂಖ್ಯೆಗಳು ಸಿನಿಮಾ - ಟಿವಿ ಡೈರೆಕ್ಟರಿ ಮೂಲಕ ಸಿಗುವಂತೆ ಮಾಡಿದ ಪತ್ರಿಕಾ ಸಂಪರ್ಕಾಧಿಕಾರಿ ಎಂ.ಜಿ.ಲಿಂಗರಾಜ್ ಇದುವರೆಗೆ ಈ ಪ್ರಯತ್ನದಲ್ಲಿ ೬ ಡೈರೆಕ್ಟರಿಗಳನ್ನು ನಂದಿನಿ ಪಬ್ಲಿಕೇಷನ್ಸ್ ಮುಖಾಂತರ ಹೊರತಂದಿದ್ದಾರೆ. ಇದೀಗ ೨೦೧೫-೧೬ನೇ ಸಾಲಿನ ೭ನೇ ಕೈಪಿಡಿ ಸಿದ್ದವಾಗುತ್ತಿದ್ದು ಇದು ರಿಪಬ್ಲಿಕ್ ಡೇಗೆ ಬಿಡುಗಡೆಯಾಗಲಿದೆ.
ಈ ಬಾರಿಯ ಕೈಪಿಡಿ ಸುಮಾರು ೬೦೦ ಪುಟಗಳ ಹೊತ್ತಿಗೆಯಾಗಿ ಹೊರಬರಲಿದ್ದು, ಇದು ಸಿನಿಮಾ - ಟಿವಿ ರಂಗದವರಿಗೆ ಮಾತ್ರ ಲಭ್ಯವಾಗಲಿದೆ. ಇದಲ್ಲದೆ ತಮಿಳು, ತೆಲುಗು, ಮಲೆಯಾಳಂ ಭಾಷೆಯ ಚಲನಚಿತ್ರ ಹಾಗೂ ಟಿ.ವಿ ರಂಗಗಳಿಗೂ ಈ ಡೈರೆಕ್ಟರಿ ತಲುಪುವಂತೆ ಮಾಡುವುದು ಲಿಂಗರಾಜ್ ಅವರ ಉದ್ದೇಶವಾಗಿದ್ದು, ಬದಲಾಗಿರುವ ವಿಳಾಸ ಮತ್ತು ಸಂಪರ್ಕ ಸಂಖ್ಯೆಗಳನ್ನು ಮೊಬೈಲ್ ೯೪೪೮೬೧೩೯೭೬, emಚಿiಟ - ಟiಟಿgಚಿಡಿಚಿರಿ.mgಡಿ@gmಚಿiಟ.ಛಿom <mಚಿiಟಣo:ಟiಟಿgಚಿಡಿಚಿರಿ.mgಡಿ@gmಚಿiಟ.ಛಿom> ಇಲ್ಲಿಗೆ ಕಳುಹಿಸಬೇಕೆಂದು ಮನವಿ ಮಾಡಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed